ಈ ಜಗತ್ತು ತುಂಬಾ ದೊಡ್ಡದಿದೆ. ನಾವು ಅಂದುಕೊಂಡದ್ದಕ್ಕಿಂತಲೂ ತುಂಬಾ ದೊಡ್ಡದು. ದಿನಗಳು ಉರುಳುತ್ತಾ ಹೋಗುತ್ತಿವೆ. ಕಳೆದು ಹೋದ ಕ್ಷಣಗಳು ಎಲ್ಲೋ ದೂರದಲ್ಲಿ ಮರೆಯಾಗುತ್ತಿವೆ. ಹೊಸ ಬೆಳಕು ಚೆಲ್ಲುವುದರ ಜೊತೆಯಾಗಿ, ಹೊಸ ಹೊಸ ಆಸೆಗಳು ಚಿಗುರೊಡೆಯುತ್ತಿವೆ. ಕನಸುಗಳ ಗೋಪುರ ದೊಡ್ಡದಾಗಿ ಬೆಳೆಯುತ್ತಿದೆ. ಇದೆಲ್ಲದರ ನಡುವೆ ಹಳೆಯ ನೆನಪುಗಳು ಒಂದೊಂದಾಗಿ ಮರೆಯಾಗುತ್ತಿವೆ...
ನಾನು ಹೇಗಿದ್ದೆ, ಎನಾಗಿದ್ದೆ ಎಲ್ಲ ನನಗೆ ಮರೆತು ಹೋಗಿದೆ . ಯಾವುದೋ ಜೀವಕ್ಕೆ ಮನಸ್ಸು ಸದಾ ಮಿಡಿಯುತ್ತಿದೆ. ಪ್ರತಿ ಕ್ಷಣ, ಪ್ರತಿ ದಿನ ಹೊಸದಾಗಿದೆ. ನಾನೇಕೆ ಹಿಗಾದೆ ಎಂಬ ಪ್ರಶ್ನೆಗೆ ಉತ್ತರವೇ ಸಿಗದಾಗಿದೆ. ಕತ್ತಲೆಯು ಬೆಳಕಿನ ಹಿಂದೆ ಮರೆಯಾಗಿ, ನಿದ್ದೆಯು ಕಣ್ಣಿನ ಜೊತೆ ಸರಸವಡುತ್ತಿದೆ. ಏನಾಗಿದೆ ನನಗೆ? ಗೊತ್ತಿಲ್ಲ... ಆದರೆ ಇದು ಕನಸಂತೂ ಅಲ್ಲ...ಅಷ್ಟು ಮಾತ್ರ ಗೊತ್ತಿದೆ.
ಇದೆಲ್ಲ ಆಗಿದ್ದು ನಿನ್ನಿಂದಲೇ. ನಾನಾಗ ಹಾಯಾಗಿದ್ದೆ. ನನ್ನದೇ ಲೋಕದಲ್ಲಿ ಅಲೆದಾಡುತ್ತಿದ್ದೆ. ಆದರೆ ಈ ಜಗತ್ತೇ ಹೀಗೆ... ಸುಮ್ಮನಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಒಂದು ದಿನ ನನ್ನ ಕಲ್ಪನಾ ಲೋಕ ಒಡೆದು ಹೋಯಿತು. . . ಒಂದು ಬೆಳಕಿನ ಕಿರಣವು ಸುಂದರ ಮಾಯಾ ಲೋಕವನ್ನು ಸೃಷ್ಟಿ ಮಾಡಿತು. ಕಲ್ಪನಾ ಲೋಕ ದಿನೇ ದಿನೇ ಮರೆಯಾಗುತ್ತ ಸಾಗಿತು. ಕೊನೆಗೊಂದು ದಿನ ಮರೆತೇ ಹೋಯಿತು. ಇಷ್ಟಕ್ಕೆಲ್ಲ ಆ ಬೆಳಕಿನ ಕಿರಣವೇ ಕಾರಣ. ಸುಂದರ ಬೆಳಕು ಚೆಲ್ಲಿ ನಿನ್ನೆಯದೆಲ್ಲ ಮರೆಸಿ ಬಿಟ್ಟಿತು. ಜೀವನಕ್ಕೆ ಹೊಸ ಸ್ಪೂರ್ತಿ ತುಂಬಿತು.
ಆ ಬೆಳಕಿನ ಕಿರಣವೇ ನನ್ನ ಜೀವನ, ನನ್ನ ಉಸಿರು. ಅದಿಲ್ಲದೆ ಬದುಕೇ ಅಸಾಧ್ಯ. ನನ್ನ ಪ್ರೀತಿಯೇ ಆ ಬೆಳಕು. ನನ್ನ ಬದುಕೇ ಆ ಬೆಳಕಿಗಾಗಿ. ಆ ಬೆಳಕು ಯಾವಾಗಲು ನನ್ನ ಜೊತೆಯಿರಬೇಕು. ಆಗ ಮಾತ್ರ ಹೊಸ ಆಸೆಗಳಿಗೆ ಜೀವ. ಹೊಸ ಜೀವಕ್ಕೆ ಹುರುಪು. ಅದುವೇ ಜೀವನ.
Wednesday, 10 June 2009
Subscribe to:
Comments (Atom)
